ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ /  ಜ.೨೨ ರಂದು ಕರಿಕಲ್ ಧ್ಯಾನಮಂದಿರದಲ್ಲಿ ವಿಶೇಷ ಪೂಜೆ ದೀಪೋತ್ಸವ ಹಾಗೂ ಅನ್ನಸಂತರ್ಪಣೆ

 ಜ.೨೨ ರಂದು ಕರಿಕಲ್ ಧ್ಯಾನಮಂದಿರದಲ್ಲಿ ವಿಶೇಷ ಪೂಜೆ ದೀಪೋತ್ಸವ ಹಾಗೂ ಅನ್ನಸಂತರ್ಪಣೆ

Wed, 10 Jan 2024 00:32:56  Office Staff   SOnews

ಭಟ್ಕಳ: ಜನವರಿ ೨೨ ರಂದು  ಅಯೋದ್ಯೆಯಲ್ಲಿ ರಾಮ ಮಂದಿರದ ಲೋಕಾರ್ಪಣೆ ಪ್ರಯುಕ್ತ  ಭಟ್ಕಳದ ಕರಿಕಲ್ ನಲ್ಲಿರುವ ಶ್ರೀರಾಮನ ದ್ಯಾನ ಮಂದಿರದಲ್ಲಿ  ವಿಶೇಷ ಪೂಜೆ, ದೀಪೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ನಾಯ್ಕ ಹೇಳಿದರು. ಅವರು ಕರಿಕಲ್ ನಲ್ಲಿ ಶ್ರೀರಾಮ ಸೇವಾ ಸಮಿತಿಯ ವತಿಯಿಂದ ಹಮ್ಮಿಕೊಂಡು ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು. 
  
ಧರ್ಮಸ್ಥಳದ ಕನ್ಯಾಡಿಯ ಶ್ರೀರಾಮ ಕ್ಷೇತ್ರ ಸಂಸ್ಥಾನದ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಆಶಯದಂತೆ ಭಟ್ಕಳದ ಕರಿಕಲ್ ಕಿನಾರೆ ಯಲ್ಲಿರುವ ಶ್ರೀರಾಮನ ದ್ಯಾನ ಮಂದಿರದಲ್ಲಿ ಜ.೨೨ ರಂದು  ಮಧ್ಯಾಹ್ನ  ಶ್ರೀರಾಮ ದೇವರಿಗೆ ವಿಶೇಷ ಪೂಜೆ,  ನಡೆಲಿದೆ. ದೇವಸ್ತಾನಕ್ಕೆ ಬರಲಿರುವ ಭಕ್ತಾದಿಗಳಿಗೆ ಅಯೋದ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ನಡೆಯುವ  ಕಾರ್ಯಕ್ರವನ್ನು  ದೊಡ್ಡ ಸ್ಕಿçÃನ್ ಮೇಲೆ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗುವುದು, ಪ್ರಸಾದ ವಿತರಣೆಯ ನಂತರ  ಭಕ್ತರಿಗೆ ಅನ್ನಸಂರ್ಪಣೆಯೂ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಕ್ಕೆ ಭಕ್ತಾಧಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಶ್ರೀರಾಮ ದೇವರ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು. 

ಈ ಸಂದರ್ಭದಲ್ಲಿ  ರಾಜ್ಯ ಪಶ್ಶಿಮಘಟ್ಟದ ಕಾರ್ಯಪಡೆಯ ಮಾಜಿ ಅದ್ಯಕ್ಷ ಗೋವಿಂದ ನಾಯ್ಕ, ಪ್ರಮುಖರಾದ ನಾಮಧಾರಿ  ಗುರಮಠದ ಉಪಾಧ್ಯಕ್ಷ ಎಂ.ಕೆ.ನಾಯ್ಕ, ಪ್ರಮುಖರಾದ ಕೆ.ಆರ್. ನಾಯ್ಕ, ವಿನಾಯಕ ನಾಯ್ಕ, ಭವಾನಿಶಂಕರ ನಾಯ್ಕ,ಸತೀಶಕುಮಾರ ನಾಯ್ಕ, ಕೆ.ಜಿ.ನಾಯ್ಕ,ವೆಂಕಟ್ರಮಣ ನಾಯ್ಕ ಸೇರಿದಂತೆ ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
 
 


Share: